ಇಹಕೆ ಬಂದಿಳಿದೊಡನೆ ನಿನ್ನ ದಿಟ್ಟಿ ಹಿಂದಿರುಗಿ ಹೋಗುವೆಡೆಗೆ ನೆಟ್ಟಿರುವೆ..
ಯಾಕಿಂಥ ಧಾವಂತ???
ಮನ್ವಂತರಗಳ ಬಳಿಕವೂ ಇಲ್ಲಿರಲಾಗದೆ ಅಲ್ಲಿಗೆ ಹೋಗಲಾಗದೆ ಜೋತು ಬಿದ್ದಿರುವೆ..
ಅಲ್ಲೇನ ಇಟ್ಟಿರುವೆ??
ಇಲ್ಲಿರುವವರೆಗೆ ಇರು ನೀ ಜೀವಂತ
ಬದುಕಿರುವೆನೆಂಬ ಭ್ರಮೆಯ ಬಿಡು
ಮರಣಿಸುವೆನೆಂಬ ಭಯವ ಬಿಡು
ನೀನು ಅಂದೂ ಇದ್ದಿ
ಇಂದೂ ಇರುವಿ
ಮುಂದೆಯೂ ನಿನ್ನಿರವು ನಿಶ್ಚಿತ
ಯಾಕಿಂಥ ಧಾವಂತ???
ಮನ್ವಂತರಗಳ ಬಳಿಕವೂ ಇಲ್ಲಿರಲಾಗದೆ ಅಲ್ಲಿಗೆ ಹೋಗಲಾಗದೆ ಜೋತು ಬಿದ್ದಿರುವೆ..
ಅಲ್ಲೇನ ಇಟ್ಟಿರುವೆ??
ಇಲ್ಲಿರುವವರೆಗೆ ಇರು ನೀ ಜೀವಂತ
ಬದುಕಿರುವೆನೆಂಬ ಭ್ರಮೆಯ ಬಿಡು
ಮರಣಿಸುವೆನೆಂಬ ಭಯವ ಬಿಡು
ನೀನು ಅಂದೂ ಇದ್ದಿ
ಇಂದೂ ಇರುವಿ
ಮುಂದೆಯೂ ನಿನ್ನಿರವು ನಿಶ್ಚಿತ