ಬೆಳಕಿನ ಹಾರೈಕೆ..
ಬೆಳಕೆಂದರೆ ಏನು??
ಒಳಗಿನದಾ?? ಹೊರಗಿನದಾ??
ಹೊರಗೆ ಬೆಳಕುಂಟು ಕಣ್ಣ ವಿಸ್ತಾರವಿದ್ದಷ್ಟು..
ಒಳಗೆ ಬೆಳಕಿದ್ದಲ್ಲಿ ಇರುವ ಆಳವೆಷ್ಟು???
ಒಳಗಿರುವುದು ಕತ್ತಲೆಯಾ, ಬೆಳಕಾ??
ಬೆಳಕನ್ನು ಹೊದ್ದ ಕತ್ತಲೆಯಾ??
ಕತ್ತಲೆಯನ್ನು ಹೊದ್ದ ಬೆಳಕಾ??
ಬಲ್ಲಿರಾ ನೀವು.. ಕಂಡಿರುವಿರಾ ನೀವು..???
ಇದ ಬಲ್ಲವರು ಇರುವರೇಕೆ ಸುಮ್ಮನೆ...
ಅವರು ಬಲ್ಲರು...
ಅಲ್ಲಿರುವುದು ನಮ್ಮನೆ... ಇಲ್ಲಿ ಬಂದೆವು ಸುಮ್ಮನೆ..
ತಿಳಿಯದವರದ್ದೇ ಆರ್ಭಟ..
ಹಣಕ್ಕಾಗಿ ಹಾರಾಟ.. ಜನಕ್ಕಾಗಿ ಕಾದಾಟ..
ಇಲ್ಲಿರುವುದೇ ನಮ್ಮನೆ.. ಅಲ್ಲಿಗೆ ಹೋಗುವುದು ಸುಮ್ಮನೇ..
ಆತ್ಮ ಧ್ಯಾನಿಸೋ ಮನುಜ ಅಂದರು ಬಲ್ಲವರು...
ಬಲ್ಲವರಿಗಷ್ಟೇ ಗೊತ್ತು... ಒಳಗೆ ಬೆಳಕುಂಟು..
ಅಸತ್ಯದ ಮಾಯೆಯಿಂದ ಸತ್ಯದ ವಾಸ್ತವಿಕತೆಯೆಡೆಗೆ...
ಅಜ್ಞಾನದ ಕತ್ತಲಿನಿಂದ ಅರಿವೆಂಬ ಬೆಳಕಿನೆಡೆಗೆ..
ಸಾವೆಂಬ ಭ್ರಮೆಯಿಂದ ಬದುಕೆಂಬ ಅಮರತ್ವದೆಡೆಗೆ ಸಾಗುತ್ತಿರಲಿ ಪಯಣ...
ಇದು ಬದುಕಿನಾಚೆಗಿನ ಬದುಕಿಗೆ ಹೋಳಿಗೆಯ ಹೂರಣ..
ನನ್ನೆಲ್ಲಾ ಗೆಳೆಯ, ಗೆಳತಿಯರಿಗೆ...
ಬೆಳಕಿನ ಹಬ್ಬದ ಹೊಂಬೆಳಕಿನ ಶುಭಾಶಯಗಳು...
No comments:
Post a Comment