ಹೀಗೊಂದು ಅನಾವರಣಕ್ಕಾಗಿ ಎಷ್ಟು ಪರಿತಪಿಸಿದೆ... ಗೊತ್ತಿಲ್ಲ... ನನ್ನ ಅಲ್ಪ ಜ್ಞಾನವನ್ನು ಎಲ್ಲರೊಂದಿಗೂ ಹಂಚಿಕೊಳ್ಳಬೇಕೆನ್ನುವ ಇರಾದೆ
ಇದ್ದದ್ದೇನೋ ನಿಜ... ಆದರೆ ಮನಸು ಕಳ್ಳ ಬೀಳುವುದೇ ಹೆಚ್ಚು...
ಕಳ್ಳ ಬೀಳುವ ಮನಸನ್ನು ಮತ್ತೆ ಗುರಿಯೆಡೆಗೆ ಎಳೆದು ತಂದು ನಿಲ್ಲಿಸುವುದಿದೆಯಲ್ಲ... ಅದೊಂದು ಕಸರತ್ತು... ಮದದಾನೆಯನ್ನು ಪಳಗಿಸುವ ಕೆಲಸ...
ಅದಕ್ಕೆಂದೇ ಮನಸೇ ಓ ಮನಸೇ ಬರೆಯಲು ಕುಳಿತೆ. ಇದು ಸುಲಭದಲ್ಲಿ ಮುಗಿಯುವ ಮಾತಲ್ಲ. ಮನಸಿನ ಬಗ್ಗೆ ಬರೆಯಲು ಕುಳಿತರೆ ಒಂದು ಉದ್ಗ್ರಂಥವೆ ಆಗುವುದೇನೋ.
ಅತಿರಥ ಮಹರಥರೂ ಕೂಡ ಮನಸಿನ ಬಗ್ಗೆ ಬರೆದು ಬರೆದು ಕೃತಾರ್ಥರಾಗಿ ಹೋಗಿದ್ದಾರೆ... ಮನಸನ್ನು ಮರ್ಕಟಕ್ಕೆ ಹೋಲಿಸಿ ನಿರ್ಲಿಪ್ತರಾದವರೂ ಇದ್ದಾರೆ.
ಇಲ್ಲಿ ನಾನೂ ಕೂಡ ಹಾಗೆ. ಮನಸಿನ ಹೊಡೆತಕ್ಕೆ ಮಹಮಹಿಮರೆಲ್ಲ ಅಡ್ಡಡ್ಡ ಮಲಗಿರುವಾಗ ನಾನೂ ಕೂಡ ಯಾವ ಸೀಮೆಯ ಗಿಡದ ತೊಪ್ಪಲು?
ಆದರೂ... ನನ್ನ ಅಭಿಪ್ರಾಯ ಮತ್ತು ಜ್ಞಾನದ ಸಾರ ಸಂಗ್ರಹವನ್ನು ನಿಮಗೆ ಉಣಬಡಿಸುವ ತವಕದಲ್ಲಿ ಇದ್ದೇನೆ... ಇದು ನಾನು ಕಂಡದ್ದು ಕೇಳಿದ್ದು ಓದಿದ್ದು ಅನುಭವಿಸಿದ್ದರ ಒಟ್ಟು ಸಾರಾಂಶ ಅಷ್ಟೇ...
ಓದಿ... ಇಷ್ಟವಾದರೆ... ನನಗೊಂದು ಪತ್ರ ಬರೆಯಿರಿ. ನನ್ನ ವಿ-ಅಂಚೆ mrkotyan@yahoo.com ಗೆ ಓಗಾಯಿಸಿ. ಇಲ್ಲವಾದರೆ ಮರೆತುಬಿಡಿ
No comments:
Post a Comment